Index   ವಚನ - 469    Search  
 
ಅರುಹಿನ ಮರಹಿನ ಅಪ್ಯಾಯನವ ಲಿಂಗಕ್ಕೆ ಕೊಡುವ ಗುರುದ್ರೋಹಿಯನೇನೆಂಬೆ? ಲಿಂಗದ್ರೋಹಿಯನೇನೆಂಬೆ? "ಇಷ್ಟಲಿಂಗಮವಗ್ರಾಹೀ ಪ್ರಾಣಲಿಂಗೇನ ಸಂಯುತಃ| ನಿಮಿಷಾರ್ಧವಿಯೋಗೇನ ಮಹಾಪಾಪಂ ತು ಸಂಭವೇತ್"|| ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಅರಿವಿನ ಮರಹಿನ ಭಕ್ತಿ, ಬಾಯಲ್ಲಿ ಹುಡಿಯ ಹೊಯ್ದು ಹೋಯಿತ್ತು.