Index   ವಚನ - 473    Search  
 
ಆಯತಲಿಂಗದಲ್ಲಿ ಆಗಾಗಿ ಭಕ್ತನೆನಿಸೂದಯ್ಯಾ. ಸ್ವಾಯತಲಿಂಗದಲ್ಲಿ ಆಗಾಗಿ [ಯುಕ್ತ]ನೆನಿಸೂದಯ್ಯಾ. ಸಂಯೋಗದಲ್ಲಿ ಆಗಾಗಿ ಶರಣನೆನಿಸೂದಯ್ಯಾ. ಪ್ರಾಣಕ್ಕೆ ಪ್ರಾಣವಾಗಿ ಉಭಯಪ್ರಾಣವೆಂದೆನಿಸೂದಯ್ಯಾ. ಘನಕ್ಕೆ ಘನ ಮನವಾದಲ್ಲಿ ಮನವೇದ್ಯನೆಂದೆನಿಸೂದಯ್ಯಾ, ಕೂಡಲಚೆನ್ನಸಂಗಯ್ಯಾ, ಲಿಂಗ ಸರ್ವಾಂಗದಲ್ಲಿ ಅನುಭಾವದಿಂದ ಅಧಿಕನೆಂದೆನಿಸೂದಯ್ಯಾ.