Index   ವಚನ - 482    Search  
 
ಪಿಂಡದ ಮೇಲೊಂದು ಪಿಂಡವನಿರಿಸಿ, ಆ ಪಿಂಡದ ಮೇಲೊಂದು ಲಿಂಗವ ನಿಕ್ಷೇಪಿಸಿ, ಪಿಂಡ ಪಿಂಡವನರಿಯದು, ಲಿಂಗ ಲಿಂಗವನರಿಯದು. ಒಳಗಿದ್ದ ಲಿಂಗಕ್ಕೆ ಅದ್ಭುತ ಸಂಕಟವಾಯಿತ್ತು. 'ಪಿಂಡಸ್ಥಂ ಪಿಂಡಮಧ್ಯಸ್ಥ ಸಾ ಪಿಂಡೇನ ತು ಘಟೀಕೃತಮ್ ಪಿಂಡೇನ ಪಿಂಡಿತಂ ಪಿಂಡಂ ಪಿಂಡರೂಪಮುದಾಹೃತಮ್ ಯತಃ ಶಿವಮಯಂ ಪಿಂಡಂ ಸರ್ವತತ್ವಾಲಯಂ ವಿದುಃ' ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನು ಅಕಾಯಚರಿತ್ರನು.