Index   ವಚನ - 481    Search  
 
ಕಂಗಳ ಅಂಗಳದಲ್ಲಿ ಲಿಂಗ ಅನಿಮಿಷವಾಗಿಹುದೆ [ನೇತ್ರ]ಕಾಯವು. ಶ್ರೋತ್ರ ಸೊಗಸಿನ ಘನಾನುಭಾವದಲ್ಲಿಹುದೆ ಶ್ರೋತ್ರಕಾಯವು, ಮನ ಪ್ರಾಣ ಸಂಯೋಗದದಿಂದ, ಕೂಡಲಚೆನ್ನಸಂಗನಲ್ಲಿ ನಿಜವಾಗಿಹುದೆ ಶರಣಕಾಯವು.