Index   ವಚನ - 483    Search  
 
ಪದ್ಮಪತ್ರದಲ್ಲಿ ಪದಸ್ಥರಿಬ್ಬರು ಕಾದುಕೊಂಡು ಇದ್ದಾರು. ಪದ್ಮ ಬೆಂದು ಪತ್ರ ಉಳಿಯಿತ್ತಯ್ಯಾ. ಆ ಪತ್ರದ ಭೇದವ ಕೂಡಲಚೆನ್ನಸಂಗಾ, ನಿಮ್ಮ ಶರಣಬಲ್ಲ.