ಪಿಂಡದ ಮೇಲೊಂದು ಪಿಂಡವನಿರಿಸಿ,
ಆ ಪಿಂಡದ ಮೇಲೊಂದು ಲಿಂಗವ ನಿಕ್ಷೇಪಿಸಿ,
ಪಿಂಡ ಪಿಂಡವನರಿಯದು, ಲಿಂಗ ಲಿಂಗವನರಿಯದು.
ಒಳಗಿದ್ದ ಲಿಂಗಕ್ಕೆ ಅದ್ಭುತ ಸಂಕಟವಾಯಿತ್ತು.
'ಪಿಂಡಸ್ಥಂ ಪಿಂಡಮಧ್ಯಸ್ಥ ಸಾ ಪಿಂಡೇನ ತು ಘಟೀಕೃತಮ್
ಪಿಂಡೇನ ಪಿಂಡಿತಂ ಪಿಂಡಂ ಪಿಂಡರೂಪಮುದಾಹೃತಮ್
ಯತಃ ಶಿವಮಯಂ ಪಿಂಡಂ ಸರ್ವತತ್ವಾಲಯಂ ವಿದುಃ'
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣನು ಅಕಾಯಚರಿತ್ರನು.
Art
Manuscript
Music
Courtesy:
Transliteration
Piṇḍada mēlondu piṇḍavanirisi,
ā piṇḍada mēlondu liṅgava nikṣēpisi,
piṇḍa piṇḍavanariyadu, liṅga liṅgavanariyadu.
Oḷagidda liṅgakke adbhuta saṅkaṭavāyittu.
'Piṇḍasthaṁ piṇḍamadhyastha sā piṇḍēna tu ghaṭīkr̥tam
piṇḍēna piṇḍitaṁ piṇḍaṁ piṇḍarūpamudāhr̥tam
yataḥ śivamayaṁ piṇḍaṁ sarvatatvālayaṁ viduḥ'
idu kāraṇa, kūḍalacennasaṅgayyā
nim'ma śaraṇanu akāyacaritranu.
ಸ್ಥಲ -
ಪ್ರಾಣಲಿಂಗಿಯ ಶರಣಸ್ಥಲ