ಅಂಗಸಂಬಂಧ ಲಿಂಗವಾದ ಬಳಿಕ
ಲಿಂಗೋಪಜೀವಿಯಾಗಿರಬೇಕು.
ಲಿಂಗಸಂಬಂಧ ಅಂಗವಾದ ಬಳಿಕ
ಲಿಂಗೋಪಜೀವಿಯಾಗಿರಬೇಕು,
ಇದಾವ ಸಂಬಂಧವಿಲ್ಲದೆ ಆಶ್ರಯ
ಗುಣದಿಂದ ಲಾಂಛನವಾದುದೇನಯ್ಯಾ?
"ಲಾಂಛನಂ ದುರ್ಲಭಂ ಚೈವ ಸ್ವಾನುಭಾವೋಹ್ಯತಃ ಪರಮ್|
ದುರ್ಲಭಂ ಶಿವತತ್ತ್ವಂ ಚ ಪ್ರಾಣಲಿಂಗಮತಃ ಪರಮ್"||
ಎಂದುದಾಗಿ, ಆಶ್ರಯದ ಪರಿಯಲ್ಲ;
ನಿರಾಶ್ರಯದ ಪರಿಯಲ್ಲ,
ಲಿಂಗಸಾರಾಯ ಶರಣ.
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಮಹದನುಭಾವ, ನಿರ್ಗಮನವಾದ ಬಳಿಕ.
Art
Manuscript
Music
Courtesy:
Transliteration
Aṅgasambandha liṅgavāda baḷika
liṅgōpajīviyāgirabēku.
Liṅgasambandha aṅgavāda baḷika
liṅgōpajīviyāgirabēku,
idāva sambandhavillade āśraya
guṇadinda lān̄chanavādudēnayyā?
Lān̄chanaṁ durlabhaṁ caiva svānubhāvōhyataḥ param|
durlabhaṁ śivatattvaṁ ca prāṇaliṅgamataḥ param||
endudāgi, āśrayada pariyalla;
nirāśrayada pariyalla,
liṅgasārāya śaraṇa.
Idu kāraṇa, kūḍalacennasaṅgayyanalli
mahadanubhāva, nirgamanavāda baḷika.
ಸ್ಥಲ -
ಪ್ರಾಣಲಿಂಗಿಯ ಐಕ್ಯಸ್ಥಲ