Index   ವಚನ - 496    Search  
 
ಇಷ್ಟಲಿಂಗಕ್ಕೆ ಮಜ್ಜನ, ಪ್ರಾಣಲಿಂಗಕ್ಕೆ ಭೋಜನ, ತೃಪ್ತಿಲಿಂಗದ ಮುಖದಲೆ ಪರಿಣಾಮ ನೋಡಯ್ಯಾ. ಕಾಮಿತ ಕಲ್ಪಿತ ಭಾವಿತ ಅರ್ಪಿತ ತಾನಲ್ಲ. ಅಲ್ಲಲ್ಲಿಗೆ ಅವಧಾನದಾಯತವ ನೋಡಯ್ಯಾ. ಅವಧಾನದ ಕೊನೆಯಲಿಹ ಸುಯಿಧಾನದ ಲಿಂಗವನು ನಿಮ್ಮ ಶರಣನ ಸರ್ವಾಂಗದಲ್ಲಿ ಕಾಣಬಹುದು, ಕೂಡಲಚೆನ್ನಸಂಗಮದೇವಾ.