Index   ವಚನ - 495    Search  
 
ಸ್ಥೂಲ ಪಂಚಭೂತಂಗಳಲ್ಲಿ ಇಷ್ಟಲಿಂಗಪ್ರತಿಷ್ಠೆ, ಸೂಕ್ಷ್ಮ ಪಂಚಭೂತಂಗಳಲ್ಲಿ ಪ್ರಾಣಲಿಂಗ ಪ್ರತಿಷ್ಠೆ, ಕಾರಣ ಪಂಚಭೂತಂಗಳಲ್ಲಿ ತೃಪ್ತಿಲಿಂಗ ಪ್ರತಿಷ್ಠೆ. ಇಂತೀ ಸ್ಥೂಲ ಸೂಕ್ಷ್ಮ ಕಾರಣ ಮಹವು. ಮಹದುದಯದಲ್ಲಿ ಕೊನೆದೋರದಿಪ್ಪ ಜ್ಯೋತಿಯ ನಿಮ್ಮ ಶರಣನ ಸರ್ವಾಂಗದಲ್ಲಿ ಕಂಡೆನು ಕೂಡಲಚೆನ್ನಸಂಗಮದೇವಾ.