Index   ವಚನ - 516    Search  
 
ಕಲ್ಪಿತದಿಂ ಮಾಡುವ ಭಕ್ತ ನಿರ್ಧನಿಕನಾದರೆ ತನ್ನ ಕೈಯ ಧನವ ವೆಚ್ಚಿಸಿ, ಆ ಭಕ್ತನ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ, ಅವರ ಮತ್ತೆ ದಾಸೋಹಕ್ಕೆ ನಿಲಿಸಿ, ತಾ ಕರ್ತನಾಗಿ ಪರಿಣಾಮಿಸಬಲ್ಲರೆ ಜಂಗಮ. ಅವರಿಗೆ ನಮೋ ನಮೋ [ಎಂಬೆ] ಅಂತಲ್ಲದೆ ಮುನ್ನ ಮಾಡಿದಿರಿ, ಈಗ ಮಾಡಿರೇನಿ ಭೋ ಎಂದು ಜರಿದು ಝಂಕಿಸಿ ಹೋಹರ ಜಂಗಮವೆಂಬೆನೆ? ಎನ್ನೆನು. ಏನು ಕಾರಣವೆಂದರೆ- ಆತ ಸೂನೆಗಾರ, ಆತ ದೋಷಾರ್ಥಿ, ಆತ ಭವಭಾರಿ ಕೂಡಲಚೆನ್ನಸಂಗಮದೇವಾ.