Index   ವಚನ - 515    Search  
 
ಬೇಡುವನೆ ಲಿಂಗಜಂಗಮ? ಬೇಡಿಸಿಕೊಂಡು ಮಾಡುವಾತ ಭಕ್ತನೆ? ಬೇಡಲಾಗದು ಲಿಂಗಜಂಗಮಕ್ಕೆ, ಬೇಡಿಸಿಕೊಂಡು ಮಾಡಲಾಗದು ಭಕ್ತಂಗೆ, ಹಿರಿಯರು ನರಮಾಂಸವ ಭುಂಜಿಸುವರೆ ಕೂಡಲಚೆನ್ನಸಂಗಮದೇವಾ?