Index   ವಚನ - 517    Search  
 
ಬೇಡಿ ಮಾಡೂದಂಗಭೋಗ, ಬೇಡದೆ ಮಾಡೂದು ಲಿಂಗಭೋಗ. ಬೇಡುವನೆ ಜಂಗಮ? ಬೇಡಿಸಿಕೊಂಬನೆ ಭಕ್ತ? ಕೂಡಲಚೆನ್ನಸಂಗಯ್ಯಾ ಮಾಟದಿಂದ ಕೂಟಕ್ಕಿಂಬಾಯಿತ್ತು.