ಕಲ್ಪಿತದಿಂ ಮಾಡುವ ಭಕ್ತ ನಿರ್ಧನಿಕನಾದರೆ
ತನ್ನ ಕೈಯ ಧನವ ವೆಚ್ಚಿಸಿ,
ಆ ಭಕ್ತನ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ,
ಅವರ ಮತ್ತೆ ದಾಸೋಹಕ್ಕೆ ನಿಲಿಸಿ,
ತಾ ಕರ್ತನಾಗಿ ಪರಿಣಾಮಿಸಬಲ್ಲರೆ ಜಂಗಮ.
ಅವರಿಗೆ ನಮೋ ನಮೋ [ಎಂಬೆ]
ಅಂತಲ್ಲದೆ ಮುನ್ನ ಮಾಡಿದಿರಿ,
ಈಗ ಮಾಡಿರೇನಿ ಭೋ ಎಂದು
ಜರಿದು ಝಂಕಿಸಿ ಹೋಹರ
ಜಂಗಮವೆಂಬೆನೆ? ಎನ್ನೆನು.
ಏನು ಕಾರಣವೆಂದರೆ-
ಆತ ಸೂನೆಗಾರ, ಆತ ದೋಷಾರ್ಥಿ,
ಆತ ಭವಭಾರಿ
ಕೂಡಲಚೆನ್ನಸಂಗಮದೇವಾ.