Index   ವಚನ - 521    Search  
 
ಸಚರಾಚರ ಚತುರ್ವಲಯದೊಳಗೆ ತಿರುಗುವ ವೇಷಧಾರಿಯನೆನಗೆ ತೋರದಿರಾ. ಆಶೆಯಾ ಧಿಕ್ಕರಿಸಿ "ಆಶಯಾ ಬಧ್ಯತೇ ಲೋಕಃ ಕರ್ಮಣಾ ಬಹುಚಿಂತಯಾ| ಆಯುಃಕ್ಷೀಣಂ ನ ಜಾನಾತಿ ವೇಣುಸೂತ್ರವಧೀರ್ಯತೇ"|| ಎಂದುದಾಗಿ- ನಿರಾಶೆಯ ಪತಿಕರಿಸಿದವರ ಕಂಡರೆ ನೀ ಸರಿಯೆಂಬೆ ಕೂಡಲಚೆನ್ನಸಂಗಮದೇವಾ.