Index   ವಚನ - 522    Search  
 
ಲಿಂಗವ ಕಟ್ಟಿ ಸುಳಿವಾತ ಜಂಗಮವಲ್ಲ, ಆ ಜಂಗಮಕ್ಕೆ ಮಾಡುವಾತ ಭಕ್ತನಲ್ಲ. ಉಭಯ ಕುಳವಳಿದಾತ ಜಂಗಮ, ಆ ಜಂಗಮಕ್ಕೆ ಮಾಡುವರೆ ಭಕ್ತ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಉಭಯಕುಳವಳಿದ ಭಕ್ತಜಂಗಮವಪೂರ್ವ.