Index   ವಚನ - 544    Search  
 
ಲಿಂಗಮಧ್ಯದೊಳಗೆ ಜಗವಿದ್ದಡೇನು? ಜಗವ ಹೊರಗಿಕ್ಕಿ ಲಿಂಗವನೊಳಗಿಟ್ಟುಕೊಂಬ ಆ ಘನಕ್ಕೆ ಶರಣೆಂಬೆನು. ಆ ಮಹಾಘನವಾಯತಕ್ಕೊಳಗು, ಪ್ರಳಯಕ್ಕೆ ಹೊರಗು ಕೂಡಲಚೆನ್ನಸಂಗಾ ನಿಮ್ಮ ಶರಣರು.