Index   ವಚನ - 553    Search  
 
ಹುಸಿಯ ಹಸರವನಿಕ್ಕಿ ವಚನವನರ್ಪಿಸುವನಲ್ಲ. ಆನು ಬಲ್ಲೆನೆಂಬ ಅರಿವಿನ ಕೊರವಂಜಿಯಂತೆ ಜಗಕ್ಕೆ ಹೇಳುವನಲ್ಲ. ಘನಕ್ಕೆ ಮಹಾಘನ ತಾನಾದ ಕಾರಣ, ಕೂಡಲಚೆನ್ನಸಂಗನ ಶರಣರು ಕುಟಿಲ ಕುಹಕದೊಳಗೆ ವರ್ತಿಸುವರಲ್ಲ.