Index   ವಚನ - 556    Search  
 
ಮೂರ್ತನಲ್ಲ ಅಮೂರ್ತನಲ್ಲ, ಲಿಂಗದಲ್ಲಿ ಪ್ರಾಣಸಂಚಿತ, ಪ್ರಾಣದಲ್ಲಿ ಪ್ರಸಾದ ಸಂವರಣೆ, ಪ್ರಸಾದದಲ್ಲಿ ಕಾಯಾಶ್ರಿತ ಜನ್ಯ. ಲೋಕಲೌಕಿಕಪ್ರಸಾದದುದಯನಲ್ಲ ಕೂಡಲಚೆನ್ನಸಂಗನ ಶರಣನು.