Index   ವಚನ - 562    Search  
 
ಅಂಗದ ಮೇಲಣ ಲಿಂಗ ಅಂಗಲಿಂಗವಯ್ಯಾ, ಪ್ರಾಣದ ಮೇಲಣ ಲಿಂಗ ಪ್ರಾಣಲಿಂಗವಯ್ಯಾ, ಭಾವದ ಮೇಲಣ ಲಿಂಗ ಭಾವಲಿಂಗವಯ್ಯಾ. ಕೂಡಲಚೆನ್ನಸಂಗಾ ಲಿಂಗತ್ರಿವಿಧನಿರ್ಣಯ, ನಿಮ್ಮಲ್ಲಿ.