Index   ವಚನ - 568    Search  
 
ಕಾಯದ ಸಡಗರ ಸಂಭ್ರಮ[ದ] ಬಲೆಯಲ್ಲಿ ಸಿಲುಕಿಸಿದಿರೆನ್ನುವನು. ಆನೆಂತು ಬಲ್ಲೆನೆಂದರೆ, ಪ್ರಾಣದ ಮೇಲೆ ಲಿಂಗಪ್ರತಿಷ್ಠೆಯ ಮಾಡಿ, ಬಲೆಯಲ್ಲಿ ಸಿಲುಕಿಸಿದಿರಿ. ಇದು ಕಾರಣ ಸ್ವಾನುಭಾವರನರಸಲೇ ಬೇಕು, ಕೂಡಲಚೆನ್ನಸಂಗಾ ನಿಮ್ಮ ಶರಣನು.