Index   ವಚನ - 570    Search  
 
ದೇಹ ನಿರ್ದೇಹವೆಂದೆನುತ್ತಿಪ್ಪರಯ್ಯಾ. ದೇಹ ನಿರ್ದೇಹ[ದ] ಮರ್ಮವನರಿಯರು. ಅಹಮ್ಮೆಂಬುದೆ ದೇಹ ನೋಡಾ, ದಾಸೋಹವೆಂಬುದೆ ನಿರ್ದೇಹ ನೋಡಾ. ಅಹಂಭಾವವಳಿದುಳಿದು ದಾಸೋಹಿಯಾದ ಕೂಡಲಚೆನ್ನಸಂಗಾ ನಿಮ್ಮ ಶರಣ.