Index   ವಚನ - 578    Search  
 
ಸಚರಾಚರ ಚತುರ್ವಳಯದೊಳಗೆ ತಿರುಗುವ ವೇಷಧಾರಿಯನೆನಗೆ ತೋರದಿರಾ. "ಆಶಯಾ ಬಧ್ಯತೇ ಲೋಕಃ ಕರ್ಮಣಾ ಬಹುಚಿಂತಯಾ| ಆಯುಃಕ್ಷೀಣಂ ನ ಜಾನಾತಿ ವೇಣುಸೂತ್ರಂ ವಿಧೀಯತೇ"|| ಎಂದುದಾಗಿ ಆಶೆಯಾ ಧಿಕ್ಕರಿಸಿ, ನಿರಾಶೆಯ ವೇಷವ ಪತಿಕರಿಸಿದವರ ನೀ ಸರಿಯೆಂಬೆ, ಕೂಡಲಚೆನ್ನಸಂಗಮದೇವಾ.