Index   ವಚನ - 582    Search  
 
[ಕೇಶ] ಕಾಷಾಂಬರವನಿಕ್ಕಿದರೇನು? ರುದ್ರಾಕ್ಷೆಯ ಮಕುಟವ ಧರಿಸಿದರೇನು? ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ, ಪರಮಾರ್ಥದಲ್ಲಿ ಪರಿಣಾಮಿಗಳಲ್ಲ. ಇದು ಕಾರಣ ಕೂಡಲಚೆನ್ನಸಂಗಯ್ಯಾ ತುರುಬಾಗಲಿ, ಬೋಳಾಗಲಿ, ಬೋಳಾಗಲಿ, ಅರಿವು ಆಚಾರವುಳ್ಳುದೆ ಜಂಗಮ.