Index   ವಚನ - 583    Search  
 
ಧರೆಯ ಮೇಲೆ ಸುಳಿವ ವೇಷಲಾಂಛನಧಾರಿಗಳೆಯ್ದೆ, ಹದಿನೆಂಟು ಜಾತಿಯ ಮನೆಯ ಭಿಕ್ಷವನುಂಡು ಕೆಟ್ಟರು. ಅರೆಯ ಮೇಲಿಪ್ಪ ಅರುಹಿರಿಯರೆಯ್ದೆ ವಾಯುಭಿಕ್ಷವನುಂಡು ಕೆಟ್ಟರು. ಗಿರಿಯ ಮೇಲಿಪ್ಪ ತಪಸ್ವಿಗಳೆಯ್ದೆ ವನಭಿಕ್ಷವನುಂಡು ಕೆಟ್ಟರು. ಅರಿಯದೆ ಇಂದ್ರಿಯಂಗಳ ಕಟ್ಟಿ ಕುರುಹಿನ ನರಕಕ್ಕೆ ಹೋಹವರ ಹಿರಿಯರೆಂದು ಎನಗೆ ತೋರದಿರಾ. ಸರ್ವ ಭ್ರಾಂತಳಿದ ಮಹಂತರನೆನಗೆ ತೋರಾ, ಕೂಡಲಚೆನ್ನಸಂಗಮದೇವಾ.