Index   ವಚನ - 585    Search  
 
ಅರಿವರತು ಮರಹು ನಷ್ಟವಾದವರನೇನೆಂಬೆ? ಅರಿವರಿಯದೆ ಮರಹು ನಷ್ಟವಾಗದ ನೆರೆ ಸಂಸಾರಿಗಳನೇನೆಂಬೆ? ಕ್ರಿಯಾಕರ್ಮ ಸೂತಕರಲ್ಲದೆ ಉಭಯ ಕರ್ಮರಹಿತನೇನೆಂಬೆ? ಅಂಗವಿಕಾರದ ಹಂಗವಳಿಯದನ್ನಕ್ಕ ಕೂಡಲಚೆನ್ನಸಂಗಮದೇವಯ್ಯನೆಂದೆಂಬವರನೇನೆಂಬೆ.