Index   ವಚನ - 586    Search  
 
ಪೂರ್ವಾಶ್ರಯ ಪೂರ್ವಾಶ್ರಯವೆಂದೆಂಬರು, ಪೂರ್ವಾಶ್ರಯವಾವುದೆಂದರಿಯರು. ಪೂರ್ವವೆಂಬುದೆ ಬಂದ ಬಟ್ಟೆ, ಆಶ್ರಯವೆಂಬುದೆ ಕರಣಾದಿ ಗುಣಂಗಳು. ಈ ಉಭಯವಳಿದು ಕೂಡಲಚೆನ್ನಸಂಗನಲ್ಲಿಪ್ಪ ಶರಣಂಗೆ ಶರಣೆಂಬೆ.