Index   ವಚನ - 593    Search  
 
ಎರಡೂರ ಮಧ್ಯದಲ್ಲಿ ನೆಟ್ಟ ಸೀಮೆಯ ಕಲ್ಲು- ಲಿಂಗವೆಂದು ಕೊಟ್ಟಾತ ಗುರುವಲ್ಲ, ಕೊಂಡಾತ ಶಿಷ್ಯನಲ್ಲ. ಆದಿಯನರಿಯದ ಗುರು, ವೇಧಿಸಲರಿಯದ ಶಿಷ್ಯ, ಇವರಿಬ್ಬರೂ ಶಿವಾಚಾಕ್ಕೆ ಹೊರಗು, ಕೂಡಲಚೆನ್ನಸಂಗಯ್ಯಾ.