Index   ವಚನ - 594    Search  
 
ಹಿಂದ ಮರೆಹಿಸದೆ, ಮುಂದನರುಹಿಸದೆ ಹರಿಹರಿದು ಉಪದೇಶವ ಮಾಡುವ ಹೀಹಂದಿಗಳನೇನೆಂಬೆಯ್ಯಾ ? ಗಂಡನ ಗುರು ಹೆಂಡತಿಯ ಮಾವನೆ? ಹೆಂಡತಿಯ ಗುರು ಗಂಡನ ಮಾವನೆ? ಉಪಮೆಗೆ ಬಾರದ ವಸ್ತುವ ಭಾವಕ್ಕೆ ತಂದು ನುಡಿವ ನರಕಿಗಳ ಕೂಗಿಡೆ ಕೂಗಿಡೆ ನರಕದಲದ್ದೂದ ಮಾಬನೆ ಕೂಡಲಚೆನ್ನಸಂಗಯ್ಯಾ.