Index   ವಚನ - 596    Search  
 
ಗುರುವಾಗಬಹುದು, ಶಿಷ್ಯನಾಗಬಾರದು. ದೇವನಾಗಬಹುದು, ಭಕ್ತನಾಗಬಾರದು. ಶಿಷ್ಯನ ಪೂರ್ವಾಶ್ರಯವ ಗುರುವರಿಯ [ಗುರುವಿನ ಪೂರ್ವಾಶ್ರಯವ ಶಿಷ್ಯನರಿಯ] ಆಶೆ ನಿಮಿತ್ತವಾದ ಭಕ್ತಿ ಮುಕ್ತಿಗೆ ಸಾಧನವಲ್ಲ, ಕೂಡಲಚೆನ್ನಸಂಗನಲ್ಲಿ ನೇಮದ ಲೆಂಕರು.