Index   ವಚನ - 598    Search  
 
ಭವಿ ಮಣ್ಣಲಿ ಮಾಡಿದ ಮಡಕೆಯ ಕಳೆವುದು ಶೀಲವೆ ? ಅಲ್ಲಲ್ಲಿ ಮೆಟ್ಟಿದ ಭೂಮಿಯ ಕಳೆವುದು ಶೀಲವೆ? ಕೆರೆ ಬಾವಿ ತೊರೆಯ ತೊರೆವುದು ಶೀಲವೆ? ಅಲ್ಲಲ್ಲಿಗೆ ಒಸರುವ ಉದಕವ ತೊರೆವುದು ಶೀಲವೆ? ಲಿಂಗಾರ್ಪಿತ ಮಾಡಿದ ಪ್ರಸಾದವ ಭವಿ ನೋಡಲಿಕ್ಕೆ ಕೊಂಡರೆ ಭಾಷೆಗೆ ವ್ರತಗೇಡಿ, ಕೊಳ್ಳದಿದ್ದರೆ ಪ್ರಸಾದದ್ರೋಹಿ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಸಂಕಲ್ಪ ವಿಕಲ್ಪದಿಂದ ಕೆಟ್ಟಿತ್ತು ಶೀಲ.