Index   ವಚನ - 599    Search  
 
ಭಕ್ತರ ಮಠಕ್ಕೆ ಬಂದು ಒಳಹೊರಗೆಂಬುದು ಶೀಲವೆ? ಎನ್ನ ಲಿಂಗಕ್ಕೆ ಒಳ್ಳಿಹ ಅಗ್ಘಣಿಯ ತನ್ನಿ ಎಂಬುದು ಶೀಲವೆ? ಎನ್ನ ಲಿಂಗಕ್ಕೆ ಒಳ್ಳಿಹ ಪುಷ್ಪವ ತನ್ನಿ ಎಂಬುದು ಶೀಲವೆ? ಎನ್ನ ಲಿಂಗಕ್ಕೆ ಒಳ್ಳಿಹ ಓಗರ ಮಾಡಿ ಎಂಬುದು ಶೀಲವೆ? ಪಂಚೇಂದ್ರಿಯ ಸಪ್ತಧಾತು ಅರಿಷಡ್ವರ್ಗವ ಕೊಂದಾತನು ಕೂಡಲಚೆನ್ನಸಂಗನಲ್ಲಿ ಆತನೆ ಶೀಲವಂತನು.