Index   ವಚನ - 623    Search  
 
ರೂಪವಿಕಾರಿಗಳಿಗಿನ್ನಾಗದಯ್ಯಾ, ರುಚಿವಿಕಾರಿಗಳಿಗಿನ್ನಾಗದಯ್ಯಾ, ವಚನದ ರಚನೆಯ ನುಡಿವವರಿಗೆ ಪ್ರಸಾದ ವೇದ್ಯವಾಗದಯ್ಯಾ, ಈ ತ್ರಿವಿಧದ ಮೊದಲನರಿಯದ ಅಸಂಬಂಧಿಗಳಿಗೆ ಇನ್ನಾಗದಯ್ಯಾ, ಕೂಡಲಚೆನ್ನಸಂಗಾ ನಿಮ್ಮ ಪ್ರಸಾದ.