ಹದಿನೆಂಟು ಯುಗದವರು ಲಿಂಗವ ಪೂಜಿಸಿ
ದೃಷ್ಟವಾವುದು ನಷ್ಟವಾವುದೆಂದರಿಯದೆ
ಭಾವ ಭ್ರಾಮಿತರಾದರು.
ಜೀವ ಸಂಕಲ್ಪಿಗಳಾದವರು
ಜೀವದಾಹುತಿಯನೆ ಲಿಂಗಕ್ಕರ್ಪಿತವೆಂಬರು,
ಭವದ ಬಳ್ಳಿಯ ಹರಿಯಲರಿಯರು,
ಇಂಥವನೆ ಭಕ್ತ? ಇಂಥವನೆ ಪ್ರಸಾದಿ?
ಕೇಳು ಕೇಳು [ಪ್ರಸಾದಿಯ] ಮಹಿಮೆಯ:
ಪೃಥ್ವಿಯ ಸಾರಾಯದಲಾದ
ಪದಾರ್ಥವ ಲಿಂಗಕ್ಕೆ ಕೊಡದ ಭಾಷೆ,
ಅಪ್ಪುವಿಂದಾದ ಅಗ್ಘಣೆಯ
ಲಿಂಗಕ್ಕೆ ಕೊಡದ ಭಾಷೆ,
ತೇಜದಿಂದಾದ ನಿವಾಳಿಯ
ಲಿಂಗಕ್ಕೆ ಕೊಡದ ಭಾಷೆ,
ವಾಯುವಿನಿಂದಾದ ಪರಿಮಳವ
ಲಿಂಗಕ್ಕೆ ಕೊಡದ ಭಾಷೆ
ಆಕಾಶದಿಂದಾದ ಶೂನ್ಯವ
ಲಿಂಗಕ್ಕೆ ಕೊಡದ ಭಾಷೆ
ಇದೇನು ಕಾರಣವೆಂದಡೆ:
ಮತ್ತೊಂದು ಪೃಥ್ವಿವುಂಟಾಗಿ,
ಮತ್ತೊಂದು ಅಪ್ಪುವುಂಟಾಗಿ,
ಮತ್ತೊಂದು ತೇಜವುಂಟಾಗಿ,
ಮತ್ತೊಂದು ವಾಯುವುಂಟಾಗಿ
ಮತ್ತೊಂದು ಆಕಾಶವುಂಟಾಗಿ,
ಇವರ ಮೇಲಣ ಪಾಕದ್ರವ್ಯವ
ಲಿಂಗಕ್ಕೆ ಕೊಡುವುದು ಭಕ್ತಿ.
ಕೂಡಲಚೆನ್ನಸಂಗಾ ಅರ್ಪಿತ
ಮುಖವ ನಿಮ್ಮ ಶರಣ ಬಲ್ಲ.
Art
Manuscript
Music
Courtesy:
Transliteration
Hadineṇṭu yugadavaru liṅgava pūjisi
dr̥ṣṭavāvudu naṣṭavāvudendariyade
bhāva bhrāmitarādaru.
Jīva saṅkalpigaḷādavaru
jīvadāhutiyane liṅgakkarpitavembaru,
bhavada baḷḷiya hariyalariyaru,
inthavane bhakta? Inthavane prasādi?
Kēḷu kēḷu [prasādiya] mahimeya:
Pr̥thviya sārāyadalāda
padārthava liṅgakke koḍada bhāṣe,
appuvindāda agghaṇeya
liṅgakke koḍada bhāṣe,
tējadindāda nivāḷiya
liṅgakke koḍada bhāṣe,
Vāyuvinindāda parimaḷava
liṅgakke koḍada bhāṣe
ākāśadindāda śūn'yava
liṅgakke koḍada bhāṣe
idēnu kāraṇavendaḍe:
Mattondu pr̥thvivuṇṭāgi,
mattondu appuvuṇṭāgi,
mattondu tējavuṇṭāgi,
mattondu vāyuvuṇṭāgi
mattondu ākāśavuṇṭāgi,
ivara mēlaṇa pākadravyava
liṅgakke koḍuvudu bhakti.
Kūḍalacennasaṅgā arpita
mukhava nim'ma śaraṇa balla.