Index   ವಚನ - 638    Search  
 
ಪಾದೋದಕ ಪಂಚೇಂದ್ರಿಯಾರ್ಚನೆ, ಲಿಂಗೋದಕ ಲಿಂಗಾರ್ಚನೆ, ಪ್ರಸಾದೋದಕ ಘ್ರಾಣಾರ್ಚನೆ- ಲಿಂಗೋದಕ, ಪಾದೋದಕ, ಪ್ರಸಾದೋದಕ ಈ ತ್ರಿವಿಧೋದಕವ ಈ ಕ್ರಮವರಿದಲ್ಲದೆ ಮುಟ್ಟಲಾಗದು ಕೂಡಲಚೆನ್ನಸಂಗಮದೇವಾ.