Index   ವಚನ - 637    Search  
 
ತನ್ನ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳೆನೆಂಬ ಶರಣನು, ಬಿಸಿಲಲಿ ನಿಂದರೆ ಬಿಸಿಲ ಲಿಂಗಾರ್ಪಿತವ ಮಾಡಬೇಕು, ನೆಳಲಲಿ ನಿಂದರೆ ನೆಳಲ ಲಿಂಗಾರ್ಪಿತವ ಮಾಡಬೇಕು. ಧೂಪ ದೀಪ ಪರಿಮಳ ವಾಯು ರುಚಿ ರೂಪನು ಕಾಯದ ಕೈಯ್ಯಲು ಮುಟ್ಟಿ ಅರ್ಪಿಸೂದರಿದಲ್ಲ, ನಿಲ್ಲು ಮಾಣು. ಭಾವದ ಕೈಯ್ಯಲು ಮುಟ್ಟಿ ಲಿಂಗಕ್ಕೆಂಬರು ನಾವಿದನರಿಯೆವಯ್ಯಾ. [ಶಬ್ದ ಸ್ಪರ್ಶ ರೂಪ ರಸ ಗಂಧ] ನಿರವಯಲಿಂಗದಲ್ಲಿ. ಈ ತೆರನನರಿಯಬಲ್ಲರೆ ಕೂಡಲಚೆನ್ನಸಂಗಮದೇವ[ನಲ್ಲಿ ಆತ ಮಹಾಪ್ರಸಾದಿ]