ಭಾವ ಭಾವಿಸಲುಂಟೆ? ಭಾವಭಾವಿಸಲರಿಯದು.
ಅದೇನು ಕಾರಣ? ಭಾವದಲ್ಲಿ ಭರಿತನಾಗಿ,
ನೇತ್ರ ನೋಡಲುಂಟೆ? ನೇತ್ರ ನೋಡಲರಿಯದು,
ಅದೇನು ಕಾರಣ? ನೇತ್ರೇಂದ್ರಿಯದ
ಬಾಗಿಲಲ್ಲಿ ನಿಂದು ನೋಡುವನಾಗಿ.
ಶ್ರೋತ್ರ ಕೇಳಲುಂಟೆ? ಶ್ರೋತ್ರ ಕೇಳಲರಿಯದು,
ಅದೇನು ಕಾರಣ ?
ಶ್ರೋತ್ರದ ಬಾಗಿಲಲ್ಲಿನಿಂದು ಕೇಳುವನಾಗಿ.
ನಾಸಿಕ ಪರಿಮಳವರಿವುದೆ?
ನಾಸಿಕ ಪರಿಮಳವರಿಯದು, ಅದೇನು ಕಾರಣ ?
ನಾಸಿಕದ ಬಾಗಿಲಲ್ಲಿ ನಿಂದು ವಾಸಿಸುವ ತಾನಾಗಿ.
ಜಿಹ್ವೆ ರುಚಿಯನರಿವುದೆ?
ಜಿಹ್ವೆ ರುಚಿಯನರಿಯದು,
ಅದೇನು ಕಾರಣ?
ಜಿಹ್ವೆಯ ಬಾಗಿಲಲ್ಲಿ ನಿಂದು
ರುಚಿಯ ನಿಶ್ಚೈಸುವ ತಾನಾಗಿ.
(ತ್ವಕ್ಕು ಸ್ಪರ್ಶಿಸಬಲ್ಲುದೆ?
ತ್ವಕ್ಕು ಸ್ಪರ್ಶಿಸಲರಿಯದು, ಅದೇನು ಕಾರಣ?
ತ್ವಕ್ಕಿನಲ್ಲಿ ನಿಂದು ಸ್ಪರ್ಶಿಸುವ ತಾನಾಗಿ,]
ಜಂತ್ರಂಗಳಾಡಬಲ್ಲವೆ?
ಜಂತ್ರಂಗಳಾಡಲರಿಯವು, ಅದೇನು ಕಾರಣ?
ಜಂತ್ರಂಗಳನಾಡಿಸುವ
ಯಂತ್ರವಾಹಕ ತಾನಾಗಿ.
ಇದು ಕಾರಣ,
ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಸರ್ವಾಂಗಲಿಂಗಿ.
Art
Manuscript
Music
Courtesy:
Transliteration
Bhāva bhāvisaluṇṭe? Bhāvabhāvisalariyadu.
Adēnu kāraṇa? Bhāvadalli bharitanāgi,
nētra nōḍaluṇṭe? Nētra nōḍalariyadu,
adēnu kāraṇa? Nētrēndriyada
bāgilalli nindu nōḍuvanāgi.
Śrōtra kēḷaluṇṭe? Śrōtra kēḷalariyadu,
adēnu kāraṇa?
Śrōtrada bāgilallinindu kēḷuvanāgi.
Nāsika parimaḷavarivude?
Nāsika parimaḷavariyadu, adēnu kāraṇa?
Nāsikada bāgilalli nindu vāsisuva tānāgi.
Jihve ruciyanarivude?
Jihve ruciyanariyadu,
adēnu kāraṇa?
Jihveya bāgilalli nindu
ruciya niścaisuva tānāgi.
(Tvakku sparśisaballude?
Tvakku sparśisalariyadu, adēnu kāraṇa?
Tvakkinalli nindu sparśisuva tānāgi,]
jantraṅgaḷāḍaballave?
Jantraṅgaḷāḍalariyavu, adēnu kāraṇa?
Jantraṅgaḷanāḍisuva
yantravāhaka tānāgi.
Idu kāraṇa,
kūḍalacennasaṅgayyā
nim'ma śaraṇa sarvāṅgaliṅgi.
ಸ್ಥಲ -
ಶರಣನ ಪ್ರಾಣಲಿಂಗಿಸ್ಥಲ