Index   ವಚನ - 668    Search  
 
ದೃಷ್ಟದಲ್ಲಿ ನಡೆ ನುಡಿ ತನುಕ್ರೀ, ಅದೃಷ್ಟದಲ್ಲಿ ಪ್ರಾಣ ಮನಕ್ರೀ ಆಚಾರದಲ್ಲಿ ಸ್ಥಾನಾಸ್ಥಾನವೆ? "ಭಾವಸ್ಥಾನಾಂಗಲಿಂಗೇಷು ಪ್ರಾಣಲಿಂಗಾಂತರೇ ದ್ವಯಮ್ ಸನ್ನಿಧಾನತ್ಪರಂ ಲಿಂಗಂ ಸ್ಥಾಪ್ಯಮೇತ್ತತ್ತು ಧೀಮತಾ" ಈ ಉಭಯ [ಸುಸಂಗಿ] ಲಿಂಗನಿರಂತರ, ಕೂಡಲ ಚೆನ್ನಸಂಗಮದೇವಾ.