Index   ವಚನ - 667    Search  
 
ಲಿಂಗ ಪ್ರಾಣವೆಂಬೆನೆ? ಪ್ರಾಣದ ಹಂಗಿನ ಲಿಂಗ, ಪ್ರಾಣ ಲಿಂಗವೆಂಬೆನೆ? ಲಿಂಗದ ಹಂಗಿನ ಪ್ರಾಣ. ಪ್ರಾಣ ಲಿಂಗವಲ್ಲ, ಲಿಂಗ ಪ್ರಾಣವಲ್ಲ. ಈ ಉಭಯ ಸಂದಳಿದವರ ತೋರಿ ಬದುಕಿಸಯ್ಯಾ, ಕೂಡಲಚೆನ್ನಸಂಗಮದೇವಾ.