Index   ವಚನ - 671    Search  
 
ಒಂದೆಂದೆನೆ ಮೂರ್ತಿಯಾಗಿ ತೋರದು, ಎರಡೆಂಬೆನೆ ನಿರ್ಣಯಕ್ಕರಸಲಿಲ್ಲ, ಮೂರೆಂಬೆನೆ ಮೂರ್ತಿಯಾಗಿ ತೋರದು. ಸಗುಣದಲಿಲ್ಲ, ನಿರ್ಗುಣದಲಿಲ್ಲ, ಸ್ಥೂಲದಲಿಲ್ಲ, ಸೂಕ್ಷ್ಮದಲಿಲ್ಲ. ಕೂಡಲ ಚೆನ್ನಸಂಗಯ್ಯಾ, ಕನ್ನಡಿಯೊಳಗಣ ಪ್ರತಿಬಿಂಬದಂತೆ ತನ್ನೊಳಗೆ ತಾನಿದ್ದುದನರಿಯದೆ ಭಿನ್ನದಲರಸುವರೆ