Index   ವಚನ - 670    Search  
 
ಜಗಭರಿತಲಿಂಗ ಎಲ್ಲಾ ಎಡೆಯಲುಂಟು, ಶರಣಭರಿತ ಲಿಂಗವಪೂರ್ವ ನೋಡಾ. ಗಮನವುಳ್ಳ ಜಂಗಮ ಎಲ್ಲಾ ಎಡೆಯಲುಂಟು, ನಿರ್ಗಮನಿ ಜಂಗಮವಪೂರ್ವ ನೋಡಾ. ಸುಚೈತನ್ಯಲಿಂಗಕ್ಕೆ ಚೈತನ್ಯಜಂಗಮ ಸಾಹಿತ್ಯ ನೋಡಾ. ಈ ಲಿಂಗದ ಸಕೀಲ ಸಂಯೋಗದಲ್ಲಿ ಪರಿಣಾಮಿ ಕೂಡಲಚೆನ್ನಸಂಗಾ ನಿಮ್ಮ ಶರಣ.