Index   ವಚನ - 672    Search  
 
ನೇತ್ರಕಪಾಲದಲ್ಲಿ ನಿಂದ ಕಾಳಿಕೆ ಹೋದಡೆ. ಶ್ರೋತ್ರಕಪಾಲದಲ್ಲಿ ಸೊಪ್ಪು ಸೊಗಡು ಹೋದಡೆ. ಮನಕಪಾಲದಲ್ಲಿ ಮನಗ್ಲಾನಿಗೊಳ್ಳದೆ, ಪ್ರಾಣಿಯ ಕೊಲ್ಲದೆ, ಪ್ರಾಣಲಿಂಗವ ಬಲ್ಲರು ಎನ್ನ ಪ್ರಾಣಲಿಂಗ ಕಾಣಾ, ಕೂಡಲಚೆನ್ನಸಂಗಮದೇವಾ.