ಒಂದೆಂದೆನೆ ಮೂರ್ತಿಯಾಗಿ ತೋರದು,
ಎರಡೆಂಬೆನೆ ನಿರ್ಣಯಕ್ಕರಸಲಿಲ್ಲ,
ಮೂರೆಂಬೆನೆ ಮೂರ್ತಿಯಾಗಿ ತೋರದು.
ಸಗುಣದಲಿಲ್ಲ, ನಿರ್ಗುಣದಲಿಲ್ಲ,
ಸ್ಥೂಲದಲಿಲ್ಲ, ಸೂಕ್ಷ್ಮದಲಿಲ್ಲ.
ಕೂಡಲ ಚೆನ್ನಸಂಗಯ್ಯಾ,
ಕನ್ನಡಿಯೊಳಗಣ ಪ್ರತಿಬಿಂಬದಂತೆ
ತನ್ನೊಳಗೆ ತಾನಿದ್ದುದನರಿಯದೆ ಭಿನ್ನದಲರಸುವರೆ
Art
Manuscript
Music
Courtesy:
Transliteration
Ondendene mūrtiyāgi tōradu,
eraḍembene nirṇayakkarasalilla,
mūrembene mūrtiyāgi tōradu.
Saguṇadalilla, nirguṇadalilla,
sthūladalilla, sūkṣmadalilla.
Kūḍala cennasaṅgayyā,
kannaḍiyoḷagaṇa pratibimbadante
tannoḷage tāniddudanariyade bhinnadalarasuvare
ಸ್ಥಲ -
ಶರಣನ ಪ್ರಾಣಲಿಂಗಿಸ್ಥಲ