Index   ವಚನ - 684    Search  
 
ಎಲೆ ಗುರುಕಾರುಣ್ಯವಾಯಿತ್ತೆಂಬ ಅಣ್ಣಗಳು ನೀವು ಕೇಳಿರೆ: ಶಿವನಾವ ಕಡೆ ಶಕ್ತಿ ಆವ ಕಡೆ? ಉತ್ಪತ್ಯವ ಬಲ್ಲರೆ ನೀವು ಹೇಳಿರೆ! ಶಕ್ತಿಯ ಮೇಲೆ ಸಾಹಿತ್ಯವ ಮಾಡಿಕೊಟ್ಟನಲ್ಲಾ ನಿಮ್ಮ ಗುರು. ಶಿವನ ಶಿವಂಗರ್ಪಿಸುವ ಪರಿಯೆಂತೊ? ಶಿವ ನಷ್ಟ, ಶಕ್ತಿ ನಷ್ಟ, ಈ ಉಭಯಸ್ಥಳವನರಿದಡೆ ಕೂಡಲಚೆನ್ನಸಂಗಾ ನೀನೆಂಬೆನು.