Index   ವಚನ - 688    Search  
 
ಲಿಂಗವೆಂಬವಂಗೆ ಲಿಂಗವಿಲ್ಲ, ಜಂಗಮವೆಂಬವಂಗೆ ಜಂಗಮವಿಲ್ಲ. ಪ್ರಸಾದವೆಂಬವಂಗೆ ಪ್ರಸಾದವಿಲ್ಲ. ಲಿಂಗವೆನ್ನದವಂಗೆ ಲಿಂಗವುಂಟು, ಜಂಗಮವೆನ್ನದವಂಗೆ ಜಂಗಮವುಂಟು, ಪ್ರಸಾದವೆನ್ನವಂಗೆ ಪ್ರಸಾದವುಂಟು. ಈ ತ್ರಿವಿಧಸ್ಥಳವನರಿಯಬಲ್ಲರೆ ಕೂಡಲಚೆನ್ನಸಂಗ ತಾನೇ ಉಂಟು.