Index   ವಚನ - 689    Search  
 
ಲಿಂಗ ಲಿಂಗವೆಂಬವ ಲಿಂಗಸೂತಕಿಯಯ್ಯ, ಜಂಗಮ ಜಂಗಮವೆಂಬವ ಜಂಗಮಸೂತಕಿಯಯ್ಯ, ಪ್ರಸಾದ ಪ್ರಸಾದವೆಂಬವ ಪ್ರಸಾದಸೂತಕಿಯಯ್ಯ. ಈ ತ್ರಿವಿಧ ಸೂತಕಿಯ ಮಾತ ಕೇಳಲಾಗದು. ಸರ್ವಸೂತಕ ನಿರ್ವಾಹವಾಯಿತ್ತು, ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.