ಉದ್ಭ್ರಮಿಯಲ್ಲ, ಉದ್ದೇಶಿಯಲ್ಲ, ನಿದ್ರೆಗೆಟ್ಟವನು,
ನಿಜವನೆ ಬೆಳಗುತಿಪ್ಪ ನಿಶ್ಚಿಂತ ಶರಣ.
ಚಿಂತೆಗೆಟ್ಟು ಸ್ಥಿರವಾಗಿ ನಿಂದ,
ಸೀಮೆಯ ಕೆಡಿಸಿ ನಿಸ್ಸೀಮನಾದ,
ಬೋಧೆಯ ಕೆಡಿಸಿ ನಿರ್ಬೋಧಿಯಾದ,
ಕಾಯವ ಕೆಡಿಸಿ ಕರ್ಮಾದಿ ಗುಣರಹಿತನಾದ,
ಆಶೆಯ ಕೆಡಿಸಿ ನಿರಾ[ಶಕ]ನಾಗಿ ತನ್ನ ಮರೆದ,
ಇದು ಕಾರಣ, ಕೂಡಲಚೆನ್ನಸಂಗಾ
ನಿಮ್ಮ ಶರಣಂಗೆ ಆರೂ ಸರಿಯಿಲ್ಲ.
Art
Manuscript
Music
Courtesy:
Transliteration
Udbhramiyalla, uddēśiyalla, nidregeṭṭavanu,
nijavane beḷagutippa niścinta śaraṇa.
Cintegeṭṭu sthiravāgi ninda,
sīmeya keḍisi nis'sīmanāda,
bōdheya keḍisi nirbōdhiyāda,
kāyava keḍisi karmādi guṇarahitanāda,
āśeya keḍisi nirā[śaka]nāgi tanna mareda,
idu kāraṇa, kūḍalacennasaṅgā
nim'ma śaraṇaṅge ārū sariyilla.