ಕರ್ತೃತ್ವವಿಲ್ಲಾಗಿ ಕರ್ಮವಿಲ್ಲ,
ಕರ್ಮವಿಲ್ಲಾಗಿ ಜನನವಿಲ್ಲ,
ಜನನವಿಲ್ಲಾಗಿ ದೇಹವಿಲ್ಲ,
ದೇಹವಿಲ್ಲಾಗಿ ಭೂತಾತ್ಮ ಪವಿತ್ರ.
ಕರಣಾದಿ ಗುಣಂಗಳು ಮುನ್ನಿಲ್ಲ,
ಹಿಂದಣ ಸ್ಥಿತಿಯಿಲ್ಲ, ಮುಂದಣ ಲಯವಿಲ್ಲ,
ಆದಿ ಮಧ್ಯ ಅವಸಾನವಿಲ್ಲ,
ಬಿಚ್ಚಿ ಬೇರಿಲ್ಲ, ಬೆರಸಿವೊಂದಿಲ್ಲ,
ಉಪಮಾತೀತನೆಂಬೆ.
ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣನು ನುಡಿಗಡಣವಿಲ್ಲದ ಮುಗ್ಧನು.
Art
Manuscript
Music
Courtesy:
Transliteration
Kartr̥tvavillāgi karmavilla,
karmavillāgi jananavilla,
jananavillāgi dēhavilla,
dēhavillāgi bhūtātma pavitra.
Karaṇādi guṇaṅgaḷu munnilla,
hindaṇa sthitiyilla, mundaṇa layavilla,
ādi madhya avasānavilla,
bicci bērilla, berasivondilla,
upamātītanembe.
Kūḍalacennasaṅgayyā
nim'ma śaraṇanu nuḍigaḍaṇavillada mugdhanu.