Index   ವಚನ - 700    Search  
 
ಭಕ್ತನಾದರೆ ಭಕ್ತಿಸ್ಥಲವನರಿದು ಅರಿಯದಂತಿರಬೇಕು, ಮಹಾಹೇಶ್ವರನಾದರೆ ನಿಷ್ಠೆಯ ಕುಳವನರಿದು ಅರಿಯದಂತಿರಬೇಕು, ಪ್ರಸಾದಿಯಾದರೆ ಪ್ರಸಾದಿಸ್ಥಲವನರಿದು ಅರಿಯದಂತಿರಬೇಕು, ಪ್ರಾಣಲಿಂಗಿಯಾದರೆ ಸ್ಥಿತಿ-ಗತಿಯನರಿದು ಅರಿಯದಂತಿರಬೇಕು, ಶರಣನಾದರೆ ಸತಿಪತಿಯೆಂದರಿದು ಅರಿಯದಂತಿರಬೇಕು, ಐಕ್ಯನಾದರೆ ತಾನು ತಾನಾಗಿ ಆಗದಂತಿರಬೇಕು, ಇಂತೀ ಷಡುಸ್ಥಲವನರಿಯದೆ ಮಾಡಿದೆನೆಂಬ ಲಜ್ಜೆಗೆಟ್ಟ ಲಾಂಛನಧಾರಿಯನೇನೆಂಬೆ, ಕೂಡಲಚೆನ್ನಸಂಗಮದೇವಾ.