Index   ವಚನ - 701    Search  
 
ಲಾಂಛನದೆಡೆಯಲ್ಲಿ ಹುಸಿಯ ಸಂಪಾದಿಸುವವ ಭಕ್ತನಲ್ಲ, ಹುರುಡುವಿಡಿದಾತ ಮಾಹೇಶ್ವರನಲ್ಲ, ಪದಪದಾರ್ಥ ನಾಸ್ತಿ ಪ್ರಸಾದಿಗೆ, ಖತಿ ನಾಸ್ತಿ ಪ್ರಾಣಲಿಂಗಿಗೆ, ಶರಣಂಗೆ ಸತಿ ನಾಸ್ತಿ, ಐಕ್ಯಂಗೆ ಪತಿ ನಾಸ್ತಿ. ಇಂತೀ ಷಡುಸ್ಥಲಂಗಳ ಸಕೀಲ ಸಂಯೋಗ ಸಂಬಂಧ, ಕೂಡಲಚೆನ್ನಸಂಗಮದೇವಾ ಸಾಧಕರಳವೆ ಸಹಜದ ಒಡೆಯರಿಗಲ್ಲದೆ.