Index   ವಚನ - 703    Search  
 
ಹೊನ್ನುಳ್ಳಾತ ಭಕ್ತನಲ್ಲ, ಹೆಣ್ಣುಳ್ಳಾತ ಶರಣನಲ್ಲ, ಮಣ್ಣುಳ್ಳಾತ ಲಿಂಗೈಕ್ಯನಲ್ಲ. ಹೊನ್ನು ಜೀವ, ಹೆಣ್ಣು ಪ್ರಾಣ, ಮಣ್ಣು ದೇಹ. ಹೊನ್ನು ಭವ, ಹೆಣ್ಣು ಭವಿ, ಮಣ್ಣು ಹಮ್ಮು. ಇಂತೀ ತ್ರಿವಿಧಸ್ಥಲವಪೂರ್ವ ಕೂಡಲಚೆನ್ನಸಂಗಯ್ಯನಲ್ಲಿ.